ಬಳ್ಳಾರಿ ಜೂನ್ ೧೭. ನೀಟ್-೨೦೨೫ ರ ರಾಷ್ಟç ಮಟ್ಟದ ದಂತ ವೈದ್ಯಕೀಯ ಪ್ರವೇಶ
ಪರೀಕ್ಷೆಯಲ್ಲಿ, ಬೆಸ್ಟ್ ಕಾಲೇಜಿನ (ಬಳ್ಳಾರಿ ಪದವಿ ಪೂರ್ವ ಕಾಲೇಜು) ವಿದ್ಯಾರ್ಥಿಗಳಾದ
ಸೈಯದ್ ಮಹಮದ್ ಅಶ್ಫಕ್ (೫೫೦-ಅಂಕ), ಕೆ.ಧೀರಜ್ ೪೫೩ ಅಂಕ, ಅಫಿಫಾ ಅಂಜುಮ್ (೪೪೫- ಅಂಕ), ೪೦೦ ಅಂಕಗಳಿಗಿAತಲು ಹೆಚ್ಚು ೧೦ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳು ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರಾದ ವೆಂಕಟೇಶ್ವರರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉತ್ತಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಬೆಸ್ಟ್ ಸಂಸ್ಥೆಯ ಅಧ್ಯಕ್ಷರಾದ
ಕೋನಂಕಿ ರಾಮಪ್ಪ, ಹಾಗೂ ಉಪಾಧ್ಯಕ್ಷರಾದ ಕೋನಂಕಿ ತಿಲಕ್ಕುಮಾರ್,
ಕಾರ್ಯಧರ್ಶಿಗಳಾದ ಮನ್ನೆ ಶ್ರೀನಿವಾಸುಲು, ರಾಮರಾಯುಡು, ಉಪಪ್ರಾಚಾರ್ಯರಾದ
ಜಿ. ಶ್ರೀನಿವಾಸರೆಡ್ಡಿ ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.







